ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಸೋಮವಾರ ಲಡಾಖ್ಗೆ ಭೇಟಿ ನೀಡಿದ ಸಿಂಗ್, ಇಲ್ಲಿನ ದುರ್ಬುಕ್ ಮತ್ತು ದೌಲತ್ ಬೇಗ್ ಒಲ್ಡಿ (ಡಿಬಿಒ) ನಡುವೆ ಶ್ಯೋಕ್ ನದಿಗೆ ನಿರ್ವಿುಸಲಾಗಿರುವ ಸೇತುವೆ ಉದ್ಘಾಟಿಸಿದರು.
“ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಲಡಾಖ್ನಲ್ಲಿ ಉತ್ತಮ ಸಂಪರ್ಕವು ಖಂಡಿತವಾಗಿಯೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುತ್ತದೆ. ಸಿಯಾಚಿನ್ ಪ್ರದೇಶವು ಈಗ ಪ್ರವಾಸಿಗರಿಗೆ ಮತ್ತು ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಸಿಯಾಚಿನ್ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್ ವರೆಗೆ ಇಡೀ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆಯಲಾಗಿದೆ ”ಎಂದು ಸಿಂಗ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇವರು ಕಂಡಂತೆ…

