ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಪ್ರಕರಣದ 39ನೇ ದಿನದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅ.16ರಂದೇ ವಿಚಾರಣೆಯ ಕೊನೆಯ ದಿನವಾಗಲಿದೆ ಎಂಬ ಸುಳಿವು ನೀಡಿದ್ದಾರೆ. ವಾದಿ, ಪ್ರತಿವಾದಿಗಳಿಗಿಬ್ಬರಿಗೂ ವಾದ ಮಂಡಿಸಲು ತಲಾ 45 ನಿಮಿಷದಂತೆ 4 ಸ್ಲಾಟ್ ನೀಡಲಾಗುವುದೆಂದು ಸಿಜೆಐ ತಿಳಿಸಿದರು.
ಬುಧವಾರ ಅಂತಿಮ ದಿನದ ವಿಚಾರಣೆ ವೇಳೆ ಹಿಂದೂ ಮಹಾ ಸಭಾ ವಕೀಲರು ತಮ್ಮ ವಾದಕ್ಕೆ ಪೂರಕವಾಗಿ ಕೋರ್ಟ್ ಮುಂದಿಟ್ಟ ದಾಖಲೆಗಳು ಹಾಗೂ ರಾಮ ಜನ್ಮಸ್ಥಳ ಕುರಿತಾದ ನಕ್ಷೆಯನ್ನು ಸುನ್ನಿ ವಕ್ಫ್ ಬೋರ್ಡ್ ಮತ್ತು ಇತರೆ ಮುಸ್ಲಿಂ ಪಾರ್ಟಿಗಳ ಪರ ವಕೀಲರಾದ ರಾಜೀವ್ ಧವನ್ ಹರಿದು ಹಾಕಿದ ಹೈಡ್ರಾಮಾ ನಡೆಯಿತು.
ಈ ಹಿನ್ನೆಲೆ ಈಗಾಗಲೇ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಹಿಂದು ದಾವೆದಾರರ ಪರ ವಕೀಲ ಕೆ.ಪರಾಶರನ್, ಅಯೋಧ್ಯೆಯಲ್ಲಿ ಮಸೀದಿ ಕಟ್ಟುವ ಮೂಲಕ ಮೊಘಲ್ ದೊರೆ ಬಾಬರ್ ಮಾಡಿದ್ದ ಐತಿಹಾಸಿಕ ತಪ್ಪನ್ನು ಸರಿಪಡಿಸುವ ಕಾಲ ಈಗ ಬಂದಿದೆ. ಅಯೋಧ್ಯೆಯಲ್ಲಿ ಅನೇಕ ಮಸೀದಿಗಳಿವೆ. ಮುಸ್ಲಿಮರು ಅಲ್ಲಿ ನಮಾಜ್ ಮಾಡಬಹುದು, ಆದರೆ, ರಾಮನ ಜನ್ಮಭೂಮಿ ಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಇವರು ಕಂಡಂತೆ…
ಅಯೋಧ್ಯೆ ವಾದ ಇಂದು ಅಂತ್ಯ?
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಪ್ರಕರಣದ 39ನೇ ದಿನದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅ.16ರಂದೇ…
Ayodhya Case | ಅಯೋಧ್ಯೆ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್– News18 Kannada
Supreme Court Finishes Hearing Arguments by All Parties, Reserves Judgment
40 ದಿನಗಳಿಂದ ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್ 17ರಂದು ಪ್ರಕರಣದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
40 ದಿನಗಳ ಮ್ಯಾರಥಾನ್ ಅಯೋಧ್ಯಾ ವಿಚಾರಣೆ ಅಂತ್ಯ: ಅಂತಿಮ ತೀರ್ಪಿಗೆ ಕಾತರ-Vijaya Karnataka
India: ನ. 17ಕ್ಕೆ ಮುನ್ನ ತೀರ್ಪು? ಹಕ್ಕು ಬಿಟ್ಟುಕೊಡಲು ಸುನ್ನಿ ಬೋರ್ಡ್ ನಿರ್ಧಾರ?……..
ಅಯೋಧ್ಯೆ ಭೂ ವಿವಾದ: ಇಂದೇ ವಿಚಾರಣೆ ಅಂತ್ಯ, ಎಲ್ಲರ ಚಿತ್ತ ‘ಸುಪ್ರೀಂ’ನತ್ತ
ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಇಂದು ವಿಚಾರಣೆಗೆ ಅಂತ್ಯ ಹಾಡಲಿದ್ದು, ಇದೇ ಕಾರಣಕ್ಕೆ ಇದೀಗ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.