ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ಲವ್ ಪ್ರೊಪೋಸಲ್: ತಪ್ಪು ಎಂದ ಸಚಿವ ವಿ. ಸೋಮಣ್ಣ

Chandan Shetty proposing Nivedita Gowda

ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಯುವದಸರಾದಲ್ಲಿ ಪ್ರೇಮನಿವೇದನೆ ಮಾಡಿದ್ದರು. ಅಲ್ಲದೆ, ನಿವೇದಿತಾ ಬೆರಳಿಗೆ ಉಂಗುರವನ್ನೂ ತೊಡಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ನಿನ್ನೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಾರಿಕೆ ಇತ್ತು. ನಿವೇದಿತಾ ಗೌಡ ಅವರು ವೇದಿಕೆ ಏರುವುದು ನಿಗದಿಯಾಗಿರಲಿಲ್ಲ. ಆದರೂ ಅವರಿಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಇವರು ಕಂಡಂತೆ…

3 Comments

  Suneel

  ಖಂಡಿತ ಆಕ್ಷೇಪಾರ್ಹ. ಇದು ಅವರ ಖಾಸಗಿ ಕಾರ್ಯಕ್ರಮವೇನಲ್ಲ. ಇನ್ನಾದರೂ ಬರಿ ಗಿಮಿಕ್ ಗಳಿಂದ ಪ್ರಚಾರ ಪಡೆಯೋ ಖಯಾಲಿ ಸೆಲೆಬ್ರೆಟಿಗಳು ನಿಲ್ಲಿಸಲಿ

   Pavan

   ಈ ನಿವೇದಿತಾ ಗೌಡ ಅವರನ್ನು ವೇದಿಕೆ ಹತ್ತಲು ಬಿಟ್ಟವರು ಯಾರು..? ಅವರನ್ನು ಮೊದಲು ಹಿಡಿಯಬೇಕು..

  Raju Hiremath

  ಕಲಾವಿದರಾದವರು ಮೊದಲು ಸಾರ್ವಜನಿಕವಾಗಿ ಹೇಗೆ ಬದುಕಬೇಂದು ತಿಳಿಯಬೇಕು. ಇನ್ನೊಬ್ಬರಿ ಹೇಳಿಸಿಕೊಳ್ಳುವಂತಾಗಬಾರದು…

ನಿಮ್ಮ ಅಭಿಪ್ರಾಯ..