ಪಟಾಕಿ ನಿಷೇಧ ದೀಪಾವಳಿಯಲ್ಲಿ ಮಾತ್ರ… ಹೊಸ ವರ್ಷಾರಂಭದ ಆಚರಣೆಯಲ್ಲಿ ವಾಯು ಮಾಲಿನ್ಯವಾಗುವುದಿಲ್ಲವೇ..?

ಪಟಾಕಿ ನಿಷೇಧದ ಕೂಗು ಪ್ರತಿ ಸಲದಂತೆ ಈ ಸಲವೂ ದೀಪಾವಳಿ ಹತ್ತಿರವಾಗುತ್ತಿದ್ದಂತೆ ಕೇಳಿಬರುತ್ತಿದೆ.
ಆದರೆ ಹೊಸ ವರ್ಷಾಚರಣೆಯ ಆರಂಭದಲ್ಲಿ ಇದೇ “ಪ್ರಾಣಿ ಹಿಂಸೆ”, “ವಾಯು ಮಾಲಿನ್ಯ”, “ಬೆಳಕಿನ ಮಾಲಿನ್ಯ” ಅನ್ನುವ ದೊಡ್ಡ ದೊಡ್ಡ ಕಾರಣಗಳು ಯಾರ ಕಣ್ಣಿಗೂ ಕಾಣುವುದಿಲ್ಲ.
ಆಗ ಪಟಾಕಿಗಳು ಸದ್ದು ಮಾಡುವುದಿಲ್ಲವೇ..? ವಾಯು ಮಾಲಿನ್ಯವಾಗುವುದಿಲ್ಲವೇ..?

ನಿಮ್ಮ ಅನಿಸಿಕೆ..?

ಇವರು ಕಂಡಂತೆ…

ಶಿಕ್ಷಣ ವ್ಯಾಪಾರವೆ ? ಹೌದು ಅಂದರೆ ಗ್ರಾಹಕರ ರಕ್ಷಣೆ …?

ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣ ಒಂದು ವ್ಯಾಪಾರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಒಂದಕ್ಕಿಂತ ಒಂದು ವೈಭವೋಪೇತ ಶಾಲಾ ಕಟ್ಟಡಗಳು, ಅತಿಯಾದ ಶಿಸ್ತು ಸಾಮಾನ್ಯರಿಗೆ ಮುಜುಗರ ಹುಟ್ಟಿಸುವ ನಡವಳಿಕೆ, ಪಾಶ್ಚಾತ್ಯರ ಅನುಕರಣೆ, ಇವೆಲ್ಲವನ್ನು ಸರಿದೂಗಿಸಲು ಅತಿಯಾದ ಶುಲ್ಕ ಹೀಗಿರುವಾಗ ಶಿಕ್ಷಣವನ್ನು ವ್ಯಾಪಾರವೆಂದು ಜನಸಾಮಾನ್ಯರು ಹೇಳುತ್ತಿರುವುದ ಸರಿ ಅನ್ನಿಸುತ್ತದೆ. ಶಿಕ್ಷಣ ವ್ಯಾಪಾರವಾದಮೇಲೆ ವ್ಯವಹಾರದ ಕಟ್ಟು ಪಾಡುಗಳು ಇದಕ್ಕೂ ಅನ್ವಯಿಸ ಬೇಕಲ್ಲವೆ? ಈ ವಿಚಾರವನ್ನು ಸುಪ್ರೀಂ ಪರಿಶೀಲಿಸುವುದ ಸಮಂಜಸವಲ್ಲವೆ….

ಇವರು ಕಂಡಂತೆ…

BSNL MOBILE

ಕೆಟ್ಟ ಮೇಲೆ ಬುದ್ಧಿ ಬಂತು, …… ಕನ್ನಡ ಗಾದೆ

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮತ್ತು ಸಾರ್ವಜಿನಕ ವಲಯದ ಉದ್ದಿಮೆಗಳಲ್ಲಿ BSNL ಮತ್ತು MTNL ದೂರಸಂಪರ್ಕ ಸೇವೆ ಬಳಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂಟರ್‍ನೆಟ್‍, ಸ್ಥಿರ ದೂರವಾಣಿ ಸೇರಿದಂತೆ ಎಲ್ಲಾ ಟೆಇಲಕಾಂ ಸೇವೆಗಳನ್ನು BSNL ಅಥವಾ MTNLನಿಂದಲೇ ಪಡೆಯುವಂತೆ ಎಲ್ಲ ಸಚಿವಾಲಯಗಳಿಗೆ ಪತ್ರ ರವಾನಿಸಿದೆ.  ಈಗಾಗಲೇ ಭಾರಿ ನಷ್ಟ ಅನುಭವಿಸುತ್ತಿರುವ ಸಂಸ್ಥೆಗೆ ಇದರಿಂದ ಸ್ವಲ್ಪ ಮಟ್ಟಿನ ನೆರವು ದೊರೆತಂತಾಗುತ್ತದೆ.

Siachen Glacier

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ.

ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಸೋಮವಾರ ಲಡಾಖ್​ಗೆ ಭೇಟಿ ನೀಡಿದ ಸಿಂಗ್, ಇಲ್ಲಿನ ದುರ್​ಬುಕ್ ಮತ್ತು ದೌಲತ್ ಬೇಗ್ ಒಲ್ಡಿ (ಡಿಬಿಒ) ನಡುವೆ ಶ್ಯೋಕ್ ನದಿಗೆ ನಿರ್ವಿುಸಲಾಗಿರುವ ಸೇತುವೆ ಉದ್ಘಾಟಿಸಿದರು.

“ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಲಡಾಖ್‌ನಲ್ಲಿ ಉತ್ತಮ ಸಂಪರ್ಕವು ಖಂಡಿತವಾಗಿಯೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುತ್ತದೆ. ಸಿಯಾಚಿನ್ ಪ್ರದೇಶವು ಈಗ ಪ್ರವಾಸಿಗರಿಗೆ ಮತ್ತು ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್ ವರೆಗೆ ಇಡೀ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆಯಲಾಗಿದೆ ”ಎಂದು ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇವರು ಕಂಡಂತೆ…

India Innovation Index 2019

ಆವಿಷ್ಕಾರ ಸೂಚ್ಯಂಕ 2019: ಕರ್ನಾಟಕಕ್ಕೆ ಅಗ್ರಸ್ಥಾನ

2019ನೇ ಸಾಲಿನ ಭಾರತ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕರ್ನಾಟಕವೂ ಆವಿಷ್ಕಾರ ಮತ್ತು ಹೊಸದಾಗಿ ಹೊರ ಹೊಮ್ಮುತ್ತಿರುವ ತಂತ್ರಜ್ಞಾನಗಳಲ್ಲಿ ಉತ್ತಮ ಸಾಧನೆ ತೋರುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಲು ಸೂಕ್ತವಾದ ರಾಜ್ಯ ಕರ್ನಾಟಕ ಎಂದು ನೀತಿ ಆಯೋಗ ತಿಳಿಸಿದೆ.

ಹೊಸದಿಲ್ಲಿಯಲ್ಲಿ ಸೂಚ್ಯಂಕ ಪಟ್ಟಿಯನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯಗಳ ನಡುವೆ ಒಕ್ಕೂಟ ವ್ಯವಸ್ಥೆಯಡಿ ಉತ್ತಮ ಸಮನ್ವಯವನ್ನು ಪ್ರೋತ್ಸಾಹಿಸಲು ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಇವರು ಕಂಡಂತೆ…

Ayodhya

ಅಯೋಧ್ಯೆ… ಮುಂದೇನು..?

ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಪ್ರಕರಣದ 39ನೇ ದಿನದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅ.16ರಂದೇ ವಿಚಾರಣೆಯ ಕೊನೆಯ ದಿನವಾಗಲಿದೆ ಎಂಬ ಸುಳಿವು ನೀಡಿದ್ದಾರೆ. ವಾದಿ, ಪ್ರತಿವಾದಿಗಳಿಗಿಬ್ಬರಿಗೂ ವಾದ ಮಂಡಿಸಲು ತಲಾ 45 ನಿಮಿಷದಂತೆ 4 ಸ್ಲಾಟ್ ನೀಡಲಾಗುವುದೆಂದು ಸಿಜೆಐ ತಿಳಿಸಿದರು.

ಬುಧವಾರ ಅಂತಿಮ ದಿನದ ವಿಚಾರಣೆ ವೇಳೆ ಹಿಂದೂ ಮಹಾ ಸಭಾ ವಕೀಲರು ತಮ್ಮ ವಾದಕ್ಕೆ ಪೂರಕವಾಗಿ ಕೋರ್ಟ್‌ ಮುಂದಿಟ್ಟ ದಾಖಲೆಗಳು ಹಾಗೂ ರಾಮ ಜನ್ಮಸ್ಥಳ ಕುರಿತಾದ ನಕ್ಷೆಯನ್ನು ಸುನ್ನಿ ವಕ್ಫ್ ಬೋರ್ಡ್‌ ಮತ್ತು ಇತರೆ ಮುಸ್ಲಿಂ ಪಾರ್ಟಿಗಳ ಪರ ವಕೀಲರಾದ ರಾಜೀವ್‌ ಧವನ್‌ ಹರಿದು ಹಾಕಿದ ಹೈಡ್ರಾಮಾ ನಡೆಯಿತು.

ಈ ಹಿನ್ನೆಲೆ ಈಗಾಗಲೇ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಹಿಂದು ದಾವೆದಾರರ ಪರ ವಕೀಲ ಕೆ.ಪರಾಶರನ್, ಅಯೋಧ್ಯೆಯಲ್ಲಿ ಮಸೀದಿ ಕಟ್ಟುವ ಮೂಲಕ ಮೊಘಲ್ ದೊರೆ ಬಾಬರ್ ಮಾಡಿದ್ದ ಐತಿಹಾಸಿಕ ತಪ್ಪನ್ನು ಸರಿಪಡಿಸುವ ಕಾಲ ಈಗ ಬಂದಿದೆ. ಅಯೋಧ್ಯೆಯಲ್ಲಿ ಅನೇಕ ಮಸೀದಿಗಳಿವೆ. ಮುಸ್ಲಿಮರು ಅಲ್ಲಿ ನಮಾಜ್ ಮಾಡಬಹುದು, ಆದರೆ, ರಾಮನ ಜನ್ಮಭೂಮಿ ಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಇವರು ಕಂಡಂತೆ…

Narendra Modi and Xi Jinping

ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಮಾತುಕತೆ ಫಲಪ್ರದ..!!

ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ನಡುವಿನ  ಅನೌಪಚಾರಿಕ ಶೃಂಗ ಸಭೆ ಮಾತುಕತೆ ಫಲಪ್ರದವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ಲುವೋ ಝಹೋಯಿ ತಿಳಿಸಿದ್ದಾರೆ. ಭಾರತ ಮತ್ತು ಚೀನಾ ದೇಶವೂ ಅನೇಕ ವರ್ಷಗಳಿಂದ ಉತ್ತಮ ಸ್ನೇಹ ಹೊಂದಿದೆ. ಉಭಯ ದೇಶಗಳ ನಡುವಿನ ಈ ಸ್ನೇಹ ಸಂಬಂಧ ಮತ್ತಷ್ಟು ಬಲಪಡಿಸಬೇಕು ಎನ್ನುತ್ತಾರೆ ಲುವೋ.

ವ್ಯಾಪಾರ ಕೊರತೆ, ಹೂಡಿಕೆ ಮತ್ತು ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವರ ಮಟ್ಟದ ಮಾತುಕತೆ ಮೂಲಕ ಚರ್ಚೆ ನಡೆಸಲು ಚೀನಾ ಸಹಮತಿ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನಡುವೆ ಮಹಾಬಲಿಪುರಂನಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಉಭಯ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಚೀನಾದೊಂದಿಗೆ ಹೆಚ್ಚುತ್ತಿರುವ ಭಾರತದ ವ್ಯಾಪಾರ ಕೊರತೆ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಚೀನಾ ಒಪ್ಪಿದೆ ಎನ್ನಲಾಗಿದೆ.

ಇವರು ಕಂಡಂತೆ…

BSNL - MTNL

ಏನಾಗಲಿದೆ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಭವಿಷ್ಯ..?

ದೇಶದ ಟೆಲಿಕಾಂ ಉದ್ಯಮದ ಪೈಪೋಟಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ ಟೆಲಿಕಾಂ ಕಂಪನಿಯನ್ನು ಸ್ಥಗಿತಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ.

ನೌಕರರಿಗೆ ಸಕಾಲಕ್ಕೆ ಸಂಬಳವನ್ನೂ ನೀಡಲಾಗದ ಪರಿಸ್ಥಿತಿಯಲ್ಲಿ ಈ ಸಂಸ್ಥೆಗಳಿದ್ದು, 74 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿತ್ತು. ಆದರೆ ಸಮಗ್ರ ಪರಿಶೀಲನೆ ನಡೆಸಿರುವ ಹಣಕಾಸು ಇಲಾಖೆ ಈ ಎರಡೂ ಸಂಸ್ಥೆಗಳನ್ನು ಮುಚ್ಚುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ.

ಇವರು ಕಂಡಂತೆ…

Rajnath Singh receives Rafael

ಭಾರತಕ್ಕೆ ಮೊದಲ ರಫೇಲ್ ಹಸ್ತಾಂತರ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಮಂಗಳವಾರ ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಭಾರತ ಒಟ್ಟು 36 ರಫೇಲ್ ಯುದ್ಧವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತದ ವಾಯುಪಡೆಯ 40 ಇಂಜಿನಿಯರ್​ಗಳಿಗೆ ಮಾಹಿತಿ ಮತ್ತು ತರಬೇತಿ ನೀಡಿದ ಬಳಿಕ ಮೊದಲ ಬ್ಯಾಚ್​ನ ರಫೇಲ್ ಜೆಟ್​ಗಳನ್ನು 2021ರ ಫೆಬ್ರವರಿ ವೇಳೆಗೆ ಭಾರತಕ್ಕೆ ಕಳುಹಿಸಲಾಗುತ್ತದೆ. 2022ರ ಏಪ್ರಿಲ್ ವೇಳೆಗೆ ಒಪ್ಪಂದ ಮಾಡಿಕೊಂಡಿರುವ 36 ರಫೇಲ್ ಜೆಟ್​ಗಳು ಭಾರತಕ್ಕೆ ಬಂದಿಳಿಯಲಿವೆ ಎಂದು ಮೂಲಗಳು ತಿಳಿಸಿವೆ.

ಇವರು ಕಂಡಂತೆ…

Chandan Shetty proposing Nivedita Gowda

ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ಲವ್ ಪ್ರೊಪೋಸಲ್: ತಪ್ಪು ಎಂದ ಸಚಿವ ವಿ. ಸೋಮಣ್ಣ

ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಯುವದಸರಾದಲ್ಲಿ ಪ್ರೇಮನಿವೇದನೆ ಮಾಡಿದ್ದರು. ಅಲ್ಲದೆ, ನಿವೇದಿತಾ ಬೆರಳಿಗೆ ಉಂಗುರವನ್ನೂ ತೊಡಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ನಿನ್ನೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಾರಿಕೆ ಇತ್ತು. ನಿವೇದಿತಾ ಗೌಡ ಅವರು ವೇದಿಕೆ ಏರುವುದು ನಿಗದಿಯಾಗಿರಲಿಲ್ಲ. ಆದರೂ ಅವರಿಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಇವರು ಕಂಡಂತೆ…