Reserve Bank of India

ರೆಪೋ ದರ ಇಳಿಸಿದ ಆರ್​ಬಿಐ: ಸಾಲದ ಕಂತು ಮತ್ತಷ್ಟು ಅಗ್ಗ..!!

ಭಾರತೀಯ ರಿಸರ್ವ್​ ಬ್ಯಾಂಕ್ ಶುಕ್ರವಾರ ರೆಪೋದರದಲ್ಲಿ 25 ಮೂಲಾಂಕ ಇಳಿಕೆ ಮಾಡಿದೆ. ಇದರಿಂದ ಮನೆ, ವೈಯಕ್ತಿಕ ಮತ್ತಿತರ ಸಾಲಗಳ ಬಡ್ಡಿದರ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ದೇಶದ ಆರ್ಥಿಕತೆಗೆ ಏರುಮುಖದತ್ತ ಸಾಗಲು ಉತ್ತೇಜನ ದೊರೆಯುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಜತೆಗೆ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಶುಲ್ಕವನ್ನೂ ರದ್ದುಪಡಿಸಲು ಆರ್ಬಿಐ ನಿರ್ಧರಿಸಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಆರ್‌ಬಿಐ ಮೂರು ಬಾರಿ ರೆಪೋ ದರ ಕಡಿತ ಮಾಡಿದ್ದು, ಗೃಹ, ವಾಹನ ಸಹಿತ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇಳಿಕೆ ನಿರೀಕ್ಷಿಸಲಾಗಿದೆ.

ಇವರು ಕಂಡಂತೆ…

Mir Najaf Ali Khan

ನಿಜಾಮ್ ಸಂಪತ್ತಿನ ಕೇಸ್, ಬ್ರಿಟನ್ ಕೋರ್ಟ್ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ಹೈದರಾಬಾದ್ ನಿಜಾಮ್ ಗೆ ಸೇರಿದ್ದ ಸಂಪತ್ತಿ(ಅಂದಾಜು 35 ಮಿಲಿಯನ್ ಯುರೋ) ನ ಮೇಲಿನ ಕುರಿತ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿ, ಭಾರತದ ನಿಲುವನ್ನು ಯುನೈಟೆಡ್ ಕಿಂಗ್ ಡಮ್ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಕಳೆದ ಏಳು ದಶಕಗಳಿಂದ ಪಾಕಿಸ್ತಾನ ಈ ವಾದ ಮಂಡಿಸುತ್ತಿತ್ತು. 35 ದಶಲಕ್ಷ ಪೌಂಡ್‌ ನಮ್ಮದೆಂದು ಪಾಕ್‌ ವಾದಿಸಿತ್ತು. ಈ ಕುರಿತು ಏಳು ದಶಕಗಳಿಂದ ಕಾನೂನು ಸಮರ ನಡೆದಿತ್ತು. ಇದಕ್ಕೆ ಭಾರತ ತೀವ್ರ ಪ್ರತಿವಾದ ಮಂಡಿಸಿತ್ತು.

ವಾದ-ಪ್ರತಿವಾದಗಳನ್ನು ಆಲಿಸಿದ ಲಂಡನ್‌ ಹೈಕೋರ್ಟ್‌ ನ್ಯಾಯಮೂರ್ತಿ ಮಾರ್ಕಸ್‌ ಸ್ಮಿತ್‌, ಪಾಕಿಸ್ತಾನದ ವಾದದಲ್ಲಿ ಹುರುಳಿಲ್ಲ. ಇದು ಭಾರತಕ್ಕೆ ಮತ್ತು ನಿಜಾಮರ ಇಬ್ಬರು ಕುಡಿಗಳಿಗೆ ಸೇರುತ್ತದೆ ಎಂದು ತೀರ್ಪು ನೀಡಿದೆ.

ಇವರು ಕಂಡಂತೆ…

Narendra Modi

ಪ್ರಧಾನಿ ವಿರುದ್ಧ ನೆರೆ ಪರಿಹಾರ ನೀಡದ್ದಕ್ಕೆ ರಾಜ್ಯದ ಜನರ ಆಕ್ರೋಶ….“ಎಲ್ಲಾ ಚೆನ್ನಾಗಿದೆ”

ಬಿಹಾರ ಪ್ರವಾಹ ಪರಿಸ್ಥಿತಿ ಬಗ್ಗೆ ಅನುಕಂಪ ತೋರಿಸಿ, ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್ ಈಗ ರಾಜ್ಯದಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ. ‘ಬಿಹಾರಕ್ಕೆ ಅನುಕಂಪ ತೋರಿಸುವುದಾದರೆ ಕರ್ನಾಟಕಕ್ಕೆ ಏಕಿಲ್ಲ?’ ಎಂದು ಕನ್ನಡಿಗರು ಪ್ರಶ್ನೆ ಎತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋದಿ ಪರ ಮಾತನಾಡುತ್ತಿದ್ದವರು, ಚುನಾವಣೆಯಲ್ಲಿ ಮೋದಿ ಪರ ಪೋಸ್ಟ್​ಗಳನ್ನು ಮಾಡುತ್ತಿದ್ದವರೇ ಈಗ ತಿರುಗಿಬಿದ್ದಿರುವುದು ವಿಶೇಷ. ಇವರ ಅಸಮಾಧಾನ ಯಾವ ಮಟ್ಟಿಗಿದೆ ಎಂದರೆ ಪ್ರತಿಪಕ್ಷದ ಟೀಕೆಯನ್ನೂ ಮೀರಿದಂತೆ ಪ್ರಧಾನಿಯನ್ನು ಪ್ರಶ್ನಿಸಲಾರಂಭಿಸಿದ್ದಾರೆ.

ಇವರು ಕಂಡಂತೆ…

Siyani Benny

ಪ್ರೀತಿ ಹುಡುಕಿ ಅಬುಧಾಬಿಗೆ ಹಾರಿದ ವಿದ್ಯಾರ್ಥಿನಿ: ಉಗ್ರ ಸಂಘಟನೆ ಸೇರಿಲ್ಲ.

ಕೇರಳದ 19 ವರ್ಷದ ಕ್ರಿಶ್ಚಿಯನ್‌ ಯುವತಿ ಸಿಯಾನಿ ಬೆನ್ನಿ ಈಗ “ನಾನು ಸ್ವಇಚ್ಛೆಯಿಂದ ನನ್ನ ಪ್ರೀತಿಯನ್ನು ಅರಸಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾವುದೇ ಉಗ್ರ ಸಂಘಟನೆಗೆ ಸೇರುವುದಕ್ಕಲ್ಲ’ ಎಂದು ಹೇಳಿಕೆ ನೀಡಿದ್ದಾಳೆ.

ಕೇರಳದ ಕೋಳಿಕ್ಕೋಡ್​ ಮೂಲದ ಆಕೆಯ ಪಾಲಕರು ನಾಪತ್ತೆ ಪ್ರಕರಣ ದಾಖಲಿಸಿದ್ದು, ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇವರು ಕಂಡಂತೆ…

Rahul Gandhi
Rahul Gandhi

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ರಾಹುಲ್ ಗಾಂಧಿ ಒತ್ತಾಯ.

ಬಂಡೀಪುರ ರಾಷ್ಟ್ರೀಯ ಉದ್ಯಾನ ಪ್ರದೇಶದ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿದ ಕ್ರಮ ವಿರೋಧಿಸಿ ಕೇರಳದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವವರಿಗೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಬೆಂಬಲ ಸೂಚಿಸಿದ್ದಾರೆ.

ಪರಿಸರವನ್ನು ರಕ್ಷಿಸುವಾಗ ಸ್ಥಳೀಯ ಸಮುದಾಯಗಳ ಹಿತ ಕಾಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ. ಹುಲಿ ರಕ್ಷಿತಾರಣ್ಯದ ಈ ಭಾಗದಲ್ಲಿ ರಾತ್ರಿ ಒಂಬತ್ತರಿಂದ ಬೆಳಗ್ಗೆ ಆರು ಗಂಟೆವರೆಗೆ ವಾಹನಗಳ ಓಡಾಟ ನಿಷೇಧಿಸಲಾಗಿದೆ.

ಇವರು ಕಂಡಂತೆ…

National Unity Award

ಕೇಂದ್ರದಿಂದ ಏಕತಾ ಪ್ರಶಸ್ತಿ ಸ್ಥಾಪನೆ

ಭಾರತದ ಏಕತೆ ಮತ್ತು ಸಮಗ್ರತೆಗೆ ನೀಡುವ ಕೊಡುಗೆಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುವುದೆಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಚಿನ್ನದ ಪದಕ, ಪ್ರಶಸ್ತಿ ಪಲಕವನ್ನು ಪ್ರಶಸ್ತಿ ಒಳಗೊಳ್ಳಲಿದೆ. ನಗದು ಅನುದಾನ ಅಥವಾ ಪ್ರಶಸ್ತಿ ಮೊತ್ತ ಇರುವುದಿಲ್ಲ. ಜತೆಗೆ ಒಂದು ವರ್ಷದಲ್ಲಿ ಮೂವರಿಗೆ ಮಾತ್ರ ಅದನ್ನು ಪ್ರದಾನ ಮಾಡುವ ಪ್ರಸ್ತಾಪವಿದೆ.

ಇವರು ಕಂಡಂತೆ…

Amitabh Bachchan

ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್ ಆಯ್ಕೆ

ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರು ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್​ ಜಾವಡೇಕರ್​ ಅವರು ಟ್ವೀಟ್​ ಮೂಲಕ ಮಾಹಿತಿ ಖಚಿತಪಡಿಸಿದ್ದಾರೆ.

ಹೆಸರಾಂತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ದಾದಾ ಸಾಹೇಬ್ ಫಾಲ್ಕೆ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಚಿತ್ರರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತಿದೆ.

ಇವರು ಕಂಡಂತೆ…

Howdy Modi in Houston

ಹ್ಯೂಸ್ಟನ್​ನಲ್ಲಿ ಮೋದಿ ಮೋಡಿ

ಹ್ಯೂಸ್ಟನ್​ನಲ್ಲಿ ಅಂದಾಜು 50 ಸಾವಿರ ಜನರು ಸೇರಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ, ನಾನು ಟ್ರಂಪ್​ ಜತೆಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದೇನೆ. ಅದೆಷ್ಟೋ ವಿಚಾರಗಳನ್ನು ಚರ್ಚೆ ಮಾಡಿದ್ದೇನೆ. ಅವರ ಸಮಾಲೋಚನೆ, ಸಂಧಾನ ಕೌಶಲವನ್ನು ನೋಡಿ, ಕಲಿತು ನನ್ನಲ್ಲೂ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದರು.

ನವಭಾರತದ ನಿರ್ಮಾಣದಲ್ಲಿ ತನ್ನ ಬಹುಕಾಲದ ಮಿತ್ರ ಅಮೆರಿಕಾ ನೀಡುತ್ತಿರುವ ಸಹಕಾರವನ್ನು ಪ್ರಧಾನಿ ಮೋದಿ ಅವರು ಅಭಿನಂದಿಸಿದರು.

Bellary district division

ಇಬ್ಭಾಗದ ಹಾದಿಯಲ್ಲಿ ಬಳ್ಳಾರಿ ಜಿಲ್ಲೆ…

ವಿಜಯನಗರದ ರಾಜಧಾನಿಯಾಗಿದ್ದ ಹಂಪಿ ವಿಶ್ವ ಪಾರಂಪರಿಕ ತಾಣವಾಗಿದೆ. ಐತಿಹಾಸಿಕವಾಗಿ ಬಳ್ಳಾರಿಯೂ ಜಿಲ್ಲಾ ಕೇಂದ್ರವಾಗಿ ಪ್ರಾಮುಖ್ಯತೆ ಪಡೆದಿದೆ. ಹೊಸಪೇಟೆ, ಹಂಪಿಯನ್ನು ಒಳಗೊಂಡಂತೆ ಹಡಗಲಿ, ಹರಪನಹಳ್ಳಿ ತಾಲೂಕುಗಳು ಶತಮಾನಕ್ಕೂ ಹೆಚ್ಚು ಕಾಲದಿಂದ ಬಳ್ಳಾರಿ ಭಾಗವಾಗಿವೆ.

ಇದೀಗ ಭೌಗೋಳಿಕ ಹಾಗೂ ಆಡಳಿತಾತ್ಮಕ ವಿಚಾರವನ್ನು ಮುಂದಿಟ್ಟು ಜಿಲ್ಲೆಯನ್ನು ವಿಭಜಿಸುವ ಪ್ರಯತ್ನ ನಡೆದಿದೆ. ಈ ವಿಚಾರವಾಗಿ ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನಲ್ಲಿ ಜಿಲ್ಲಾ ಕೇಂದ್ರ ರಚನೆಯ ಬೇಡಿಕೆ ಕೇಳಿಬರುತ್ತಿದೆ. ಪ್ರತ್ಯೇಕ ಜಿಲ್ಲೆ ಕೇಳಿದರೆ ಕನಿಷ್ಠ ಶೈಕ್ಷಣಿಕ ಜಿಲ್ಲೆಯಾದರೂ ಸಿಗಬಹುದು ಎಂಬ ಆಸೆ ಹಡಗಲಿ ಜನರದ್ದಾಗಿದೆ.

ಇವರು ಕಂಡಂತೆ…

Corporate tax slashed

ಕಾರ್ಪೋರೇಟ್​ ತೆರಿಗೆ ಕಡಿತ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ

ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಿಯ ಉತ್ಪಾದನಾ ಕಂಪನಿಗಳ ಕಾರ್ಪೋರೇಟ್​ ತೆರಿಗೆಗಳನ್ನು ಶೇ.22ಕ್ಕೆ ಇಳಿಸಲು ನಿರ್ಧರಿಸಿದೆ.

ಚಿನಿವಾರ ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 1400 ಅಂಕಗಳ ಭಾರೀ ಏರಿಕೆಯೊಂದಿಗೆ 37,990.47 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ (ಎನ್ಎಸ್ಇ) 551.35 ಅಂಕಗಳ ಏರಿಕೆಯೊಂದಿಗೆ 11,256.15 ಅಂಕಗಳ ವಹಿವಾಟು ಕಂಡಿದೆ.

ಇವರು ಕಂಡಂತೆ…